15th June 2025
ಚಡಚಣ ಃ ಪಟ್ಟಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಕಾರಹುಣ್ಣಿಮೆ ವಿಶೇಷ ಎತ್ತುಗಳ ಕರಿ ಹರಿಯುವ ಕಾರ್ಯಕ್ರಮ ಬುಧವಾರ ಸಂಜೆ ೪.೦೦ ಗಂಟೆಗೆ ಸಡಗರದಿಂದ ಜರುಗಿತು.
ಮುಂಗಾರು ಆರಂಭದ ಮೊದಲ ಹಬ್ಬವೇ ಕಾರಹುಣ್ಣಿಮೆಯಾಗಿದೆ. ರೈತರು ಕೃಷಿ ಕಾರ್ಯದ ಸಂಗಾತಿ ಜೋಡೆತ್ತುಗಳಿಗೆ ನಮಿಸಿ ಆರಾಧಿಸುವ ಹಬ್ಬ. ಬೆಳಗ್ಗೆಯಿಂದಲೇ ತಮ್ಮ ಎತ್ತುಗಳಿಗೆ ಮೈತೊಳೆದು ವಿವಿಧ ಬಣ್ಣ ಹಚ್ಚಿ ಶೃಂಗಾರಗೊಳಿಸಿ, ಕೊರಳಲ್ಲಿ ಗೆಜ್ಜೆ ಸರ, ಮೈಮೇಲೆ ಬಣ್ಣ ಬಣ್ಣದ ಹೂವಿನ ಚಿತ್ರ ಬಿಡಿಸಿ,ಶಾಲು(ಹೊದಿಕೆ)ಹಾಕಿ, ಸಾಯಂಕಾಲ ಕರಿ ಹರಿಯುವ ದೃಶ್ಯ ರೋಮಾಂಚನಕಾರಿಯಾಗಿದೆ.
ಸAಜೆ ೪ ಗಂಟೆಗೆ ಕಾರಹುಣ್ಣಿಮೆಯ ರೂವಾರಿ ಗ್ರಾಮದ ಹಿರಿಯ ಗೌಡರ ಮನೆತನದ ಹಾಲಿ ಪಿಕೆಪಿಎಸ್ ಅಧ್ಯಕ್ಷ ಬಾಬುಗೌಡ ಪಾಟೀಲರ ಮನೆಯಿಂದ ಶೃಂಗಾರಗೊ0ಡ ಕರಿ ಹರಿಯುವ ಎತ್ತುಗಳ ಭವ್ಯ ಮೇರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಅಗಸಿ(ದ್ವಾರ ಬಾಗಿಲು) ಮುಂದಿರುವ ಶ್ರೀಹನುಮಾನ ದೇವಸ್ಥಾನದ ಆವರಣ ಸೇರಿದವು. ಅಲ್ಲಿ ಎತ್ತುಗಳಿಗೆ ಚಂದುಗೌಡ ಪಾಟೀಲರು ಕರಿ ಹರಿಯುವುದಕ್ಕೆ ಚಾಲನೆ ನೀಡಿದರು.
ಈ ಸಲ ಮುಂಗಾರು ಕೆಂದೆತ್ತ ಮತ್ತು ಹಿಂಗಾರು ಬಿಳಿ ಎತ್ತುಗಳು ಕೊನೆವರೆಗೂ ಸಮನಾಗಿ ಓಡಿದವು. ಅಂದರೆ ಮುಂಗಾರು ಹಿಂಗಾರು ಮಳೆ ಸಮ ಪ್ರಮಾಣದಲ್ಲಿ ಬಂದು ರೈತರಿಗೆ ಬೆಳೆಗಳು ಚನ್ನಾಗಿ ಬರುತ್ತವೆ ಎಂಬ ನಂಬಿಕೆ ಜನರಲ್ಲಿ ಇದೆ. ಸಾವಿರಾರು ರೈತಾಪಿಗಳು ಇದನ್ನು ವೀಕ್ಷಿಸಿ ಚಪ್ಪಾಳೆ ತಟ್ಟಿ ಸಂತಸ ಪಟ್ಟರು. ಕರಿ ಹರಿದ ಎತ್ತುಗಳಿಗೆ ಬಾಬುಗೌಡ ಪಾಟೀಲ ಕುಟುಂಬದವರು ಆರತಿ ಎತ್ತಿ ಪೂಜೆಗೈದರು.
“ಪಟ್ಟಣದ ಎಲ್ಲ ರೈತರು ನಾಗರಿಕರು ಕರಿ ಹರಿಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ರೈತನಿಗೆ ಸಹಪಾಠಿಯಾಗಿ ದುಡಿವ ಮತ್ತು ಅನ್ನ ನೀಡುವ ಎತ್ತುಗಳ ಸಂಭ್ರಮ ಆಚರಣೆಯಲ್ಲಿ ಭಾಗವಹಿಸಿದ್ದೀರಿ. ಹಿರಿಯರಿಂದ ಬಂದ ಈ ವಾಡಿಕೆ ನಾವು ಚಾಚೂ ತಪ್ಪದೇ ಪ್ರತಿ ವರ್ಷ ಪಾಲಿಸಿಕೊಂಡು ಹೋಗುತ್ತಿದ್ದೇವೆ. ಹಿಂಗಾರು ಮುಂಗಾರು ಬೆಳೆಗಳು ರೈತನಿಗೆ ಸಂತಸ ತರುವುದಾಗಿದೆ.” ಬಾಬುಗೌಡ ಪಾಟೀಲ ಪಿಕೆಪಿಎಸ್ ಅಧ್ಯಕ್ಷ.
ಕಾರ್ಯಕ್ರಮದಲ್ಲಿ ಬಾಬುಗೌಡ ಪಾಟೀಲ, ದುಂಡಪ್ಪ ನಿರಾಳೆ, ದ್ಯಾವಪ್ಪಗೌಡ ಪಾಟೀಲ, ಅಶೋಕ ಕುಲಕರ್ಣಿ, ಮೋನಪ್ಪ ಬಡಿಗೇರ, ಚಂದುಗೌಡ ಪಾಟೀಲ, ಪ.ಪ.ಸ ಪ್ರಕಾಶಗೌಡ ಪಾಟೀಲ, ಸಿದ್ದು ಭಮಶೆಟ್ಟಿ, ಸಂಗಪ್ಪ ಬಿರಾದಾರ, ಶಿವಗೊಂಡ ಬಿರಾದಾರ, ಲಾಲಸಾಬ ಅತ್ತಾರ, ಮಹಾದೇವ ಯಂಕ0ಚಿ, ರಾಮ ಮಾಲಾಪೂರ, ಸತೀಶ ಬಂಡಿ, ಸದಾಶಿವ ಕೌಲಗಿ, ಭೀಮನಗೌಡ ಪಾಟೀಲ, ಮಲ್ಲು ಕಾಮಗೊಂಡ, ಅನೀಲ ಮಲ್ಲಾಡಿ ಸೇರಿದಂತೆ ಪಟ್ಟಣದ ರೈತರು,ನಾಗರೀಕರು ಇದ್ದರು.
ಅಹಿಂದ ನ್ಯಾಯವಾದಿಗಳ ಸಂಘದ ವತಿಯಿಂದ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಮನವಿ*